ಬೇರಿಲ್ಲದ ಲಿಂಗಸಾರಾಯಸುಖಿ ತಾನೆಂದರಿಯದೆ
ಪಂಚಭೂತ ಪ್ರಕೃತಿಕಳಾನ್ವಿತ ತಾನೆಯಾಗಿ
ಇದು ಲಿಂಗ ನಾನು ದೇಹಿ, ಇದು ನಿರ್ಮಳ ನಾನು ಮಲಿನ,
ಇದು ಬೇರೆ ನಾನು ಬೇರೆಂದು,
ಇಲ್ಲದ ಸಂಶಯ ಸಂಬಂಧಿಸಿಕೊಂಡು
ನಾ ಕೆಟ್ಟೆನು ನಾ ಮುಟ್ಟೆನು ನಾ ಬಿಟ್ಟೆನು ಎಂದು
ಕುಟಿಲಕರ್ಮ ಕಷ್ಟದಿಂದೆ ಕಾಣಲಿಲ್ಲ ಕೇಳಲಿಲ್ಲ
ಮಾಡಲಿಲ್ಲ ಕೂಡಲಿಲ್ಲದ ಮೂಢ
ಮರುಳುಗಳು ಶರಣರೆಂತಪ್ಪರಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.