Index   ವಚನ - 632    Search  
 
ಕಾಯದ ಕತ್ತಲೆಯೊಳು ಬಿದ್ದು ಮಾಯದ ಮಲಿಕಿನಲ್ಲಿ ಶಿಲ್ಕಿ, ಹೇಮದಾಸೆಯ ಹೆಚ್ಚಿ ಭೂಮಿಯ ರಚ್ಚಿಗೆ ಮಚ್ಚಿ, ಬಾಲೆಯರ ಒಲುಮೆಗೆ ಬಿದ್ದು ಕಾಲಗತಿಯ ಕಳೆಯ ಬಂದವನಲ್ಲ ನೋಡಾ. ತನ್ನಾದಿ ಮಧ್ಯ ಅವಸಾನವನರಿದು ನಾದ ಬಿಂದು ಕಳೆಯಲ್ಲಿ ಸಾಧಿಸಿ ಕಂಡ ಸತಿಪತಿಭಾವವ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.