Index   ವಚನ - 640    Search  
 
ಕಾಲಿಲ್ಲದ ನಡೆ ಕಂಡೆನಯ್ಯಾ, ಕಂಗಳಿಲ್ಲದ ನೋಟವ ಕಂಡೆನಯ್ಯಾ. ತನುವಿಲ್ಲದ ಸೋಂಕ ಕಂಡೆನಯ್ಯಾ, ಮನವಿಲ್ಲದ ನೆನವ ಕಂಡೆನಯ್ಯಾ, ಭಾವವಿಲ್ಲದ ನಿರ್ವಯಲ ಕಂಡೆನಯ್ಯಾ, ತಾನಿಲ್ಲದೆ ನೀನಾಗಿರ್ಪ ಸುಖವ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಲ್ಲಿ ಕಂಡೆನಯ್ಯಾ.