ಸತಿಪತಿಗಳ ಮತಿಯಿಂದೆ ಅತಿಶಯದಾಡಂಬರದೊಳಗೆ
ಆಡಂಬರ ಹಣ್ಣಿ ಬಂದಿತ್ತು ನೋಡಾ!
ತಾ ಸತ್ತು ಪತಿಯಿಂದೆ ಹುಟ್ಟಿ ಪತಿ ಪಿತನಾದನೆಂದು
ಹಿತ ಹೆಚ್ಚಿ ನೆರೆಯಲು ನಿರತಿಶಯವಾದ ಮಗನ ಹಡೆದಳು ನೋಡಾ!
ಆ ಮಗನ ಕಣ್ಣ ಮುಂದೆ ಹೆಂಡತಿಯ ಭಾವತೋರಲು
ಒಳಹೊರಗಿನ ನೆಂಟರು ನೋಡಿ ದಾರಿಯೆರಡಾದವೆಂದು ಕೂಡಿ
ಮೇಲುಗತಿಯೊಳು ನೆರೆವ ಬರದುರವಣೆಯು
ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ
ಸುಖಪರಿಣಾಮವಾಯಿತ್ತು ನೋಡಾ.