Index   ವಚನ - 654    Search  
 
ತಂದೆಯ ಮಗನ ಕೈಹಿಡಿದು ಮದುವೆಯ ಮಡದಿಯಾದ ಪರಿ ಹೊಸತಯ್ಯಾ. ಮನೆಯ ಗಂಡನ ಮುಂದಿಟ್ಟು ಮೂರುಲೋಕವನರಿದು ತನ್ನತ್ತ ವಶಗತಮಾಡಿ ಸರ್ವಸಂಭ್ರಮದಿಂದೆ ನಡೆ ನೋಟ ತರಹರವಾಗಿರ್ದಳಯ್ಯಾ. ಹೊರಗೊಳಗಿನ ನೆರವೆಯ ತಂದು, ತಲೆಗೂಡಿ, ಗುರುನಿರಂಜನ ಚನ್ನಬಸವಲಿಂಗದಲ್ಲಿ ನೆರೆವ ಪರವಶದ ನಿಷ್ಪತ್ತಿಯನೇನೆಂದುಪಮಿಸುವೆನಯ್ಯಾ.