Index   ವಚನ - 656    Search  
 
ಅಚ್ಚಮುತ್ತೈದೆ ತಾನೊಬ್ಬ ಅಂಗವಿಲ್ಲದ ಪುರುಷನ ಸಂಗವಮಾಡಲು ತಬ್ಬಿಬ್ಬುಗೊಂಡಿತ್ತು ಹದಿನಾಲ್ಕು ಭುವನವೆಲ್ಲ. ಮೂರು ಮನೆಯ ನಾರಿ ನೀರಕೊಡವನೊಡೆದು ಹಾರುತಿಯಾಗಿ ಕೈಯಲ್ಲಿ ಆರತಿ ಪಿಡಿದು, ಮೂರಾರಿಗೆತ್ತಿ ಬೆಳಗುತ್ತಿರಲು ಸೂರೆಗೊಂಡು ನೆರೆದನು ನಮ್ಮ ಗುರುನಿರಂಜನ ಚನ್ನಬಸವಲಿಂಗ.