Index   ವಚನ - 655    Search  
 
ಸತಿಪತಿಗಳ ಮತಿಯಿಂದೆ ಅತಿಶಯದಾಡಂಬರದೊಳಗೆ ಆಡಂಬರ ಹಣ್ಣಿ ಬಂದಿತ್ತು ನೋಡಾ! ತಾ ಸತ್ತು ಪತಿಯಿಂದೆ ಹುಟ್ಟಿ ಪತಿ ಪಿತನಾದನೆಂದು ಹಿತ ಹೆಚ್ಚಿ ನೆರೆಯಲು ನಿರತಿಶಯವಾದ ಮಗನ ಹಡೆದಳು ನೋಡಾ! ಆ ಮಗನ ಕಣ್ಣ ಮುಂದೆ ಹೆಂಡತಿಯ ಭಾವತೋರಲು ಒಳಹೊರಗಿನ ನೆಂಟರು ನೋಡಿ ದಾರಿಯೆರಡಾದವೆಂದು ಕೂಡಿ ಮೇಲುಗತಿಯೊಳು ನೆರೆವ ಬರದುರವಣೆಯು ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ ಸುಖಪರಿಣಾಮವಾಯಿತ್ತು ನೋಡಾ.