Index   ವಚನ - 658    Search  
 
ಆಸೆಯುಳ್ಳರೆ ಭಕ್ತನೆಂಬೆ, ರೋಷವುಳ್ಳರೆ ಮಹೇಶ್ವರನೆಂಬೆ, ಆಲಸ್ಯವುಳ್ಳರೆ ಪ್ರಸಾದಿಯೆಂಬೆ, ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ, ಸಂಸಾರವುಳ್ಳರೆ ಶರಣನೆಂಬೆ, ಸಂಗವುಳ್ಳರೆ ಐಕ್ಯನೆಂಬೆ. ಇಂತಿವು ಶೂನ್ಯನಾದರೆ ಆರೂಢನೆಂಬೆ ಗುರುನಿರಂಜನ ಚನ್ನಬಸವಲಿಂಗದ ಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ.