Index   ವಚನ - 659    Search  
 
ಅಯ್ಯಾ, ಶರಣಸ್ಥಲವ ಬಲ್ಲೆನೆಂಬರು, ಬಲ್ಲತನ ಬರಿದಾಯಿತ್ತು. ಕಾಯವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ? ಕರಣವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ? ಭಾವವಿಲ್ಲದವಂಗೆ ಶರಣಸ್ಥಲವೆಲ್ಲಿಹದೊ? ಈ ತ್ರಿವಿಧವುಳ್ಳವಂಗೆ ಶರಣಸ್ಥಲವುಂಟು. ಇವು ನಾಸ್ತಿಯಾದರೆ ಶರಣಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.