ಹಮ್ಮಿಲ್ಲದೆ ಬಿಮ್ಮಿಲ್ಲದೆ ಸೊಮ್ಮಿಲ್ಲದೆ
ನಿರ್ಮಲದ ನಿಲುವಿಂಗೆ ಕುರುಹಿನಿಂದೆಯ್ದಿ ಬಂದ
ಸ್ತುತಿ ನಿಂದೆ ಅಪವಾದ ಬಾಧೆಗೆ
ಹಿಗ್ಗದೆ ಕುಗ್ಗದೆ ನೋಯದೆ ಬೇಯದೆ
ಲಿಂಗವಿನೋದವೆಂದು ನಿತ್ಯನಿಜಾನಂದವಾಗಿರ್ದ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Ham'millade bim'millade som'millade
nirmalada niluviṅge kuruhinindeydi banda
stuti ninde apavāda bādhege
higgade kuggade nōyade bēyade
liṅgavinōdavendu nityanijānandavāgirda
guruniran̄jana cannabasavaliṅgā nim'ma śaraṇa.