Index   ವಚನ - 661    Search  
 
ಅನಿತ್ಯ ವನಿತಾದಿ ಸಕಲಸಂಸೃತಿಯ ವಾಸನೆಯನಳಿದುಳಿದು ನಿಜಜ್ಞಾನಾನಂದ ನಿಲುವಿಗೆ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಗತಿ. ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಮತಿ. ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವೇ ಸಂಗ. ಇದನುಳಿದು ಅರಿಯದಂಗೆ ಗುರುನಿರಂಜನ ಚನ್ನಬಸವಲಿಂಗ ತಾನೆ.