Index   ವಚನ - 660    Search  
 
ಹಮ್ಮಿಲ್ಲದೆ ಬಿಮ್ಮಿಲ್ಲದೆ ಸೊಮ್ಮಿಲ್ಲದೆ ನಿರ್ಮಲದ ನಿಲುವಿಂಗೆ ಕುರುಹಿನಿಂದೆಯ್ದಿ ಬಂದ ಸ್ತುತಿ ನಿಂದೆ ಅಪವಾದ ಬಾಧೆಗೆ ಹಿಗ್ಗದೆ ಕುಗ್ಗದೆ ನೋಯದೆ ಬೇಯದೆ ಲಿಂಗವಿನೋದವೆಂದು ನಿತ್ಯನಿಜಾನಂದವಾಗಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.