Index   ವಚನ - 669    Search  
 
ಅಷ್ಟವಿಧಾರ್ಚನೆ ಷೊಡಶೋಪಚಾರ ಮಾಡಿ ಮಾಡಿ ಮುಂದುಗಾಣದೆ ಬಂದು ಹೋಗುವರಯ್ಯಾ. ಅಷ್ಟಮದವಳಿಯದ ಅಷ್ಟವಿಧಾರ್ಚನೆಯೆಲ್ಲಿಯದೋ? ಅಂತರಂಗದಲ್ಲಿ ಪರಮಶಾಂತಿದೋರದೆ ಷೋಡಶೋಪಚಾರವೆಲ್ಲಿಹದೊ? ತ್ರಿಪುಟಿ ಮಲತ್ರಯಸನ್ನಿಹಿತವಿರಲು ಮಾನಸಪೂಜೆಯೆಲ್ಲಿಹದೊ? ಜ್ಞಾನ ವಿಕೃತಿಭಾವ, ವರ್ತನಾವಿಕೃತಿಭಾವ, ಮೋಹವಿಕೃತಿಭಾವವೆಂಬ ಭಾವತ್ರಯಸಂಬಂಧಿಗೆ ನಿಜಾನುಭಾವದ ನಿಲುವು ಎಲ್ಲಿಹದೊ? ಇಂತು ಶರಣ ಭಕ್ತನಾಗಬೇಕಾದರೆ ಅರಿದು ಮರೆದಾಚರಿಸಬೇಕು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.