Index   ವಚನ - 670    Search  
 
ಗುರುಲಿಂಗಜಂಗಮದ ಭಕ್ತಿಯ ಮಾಡುವರು ನಾಮಧಾರಿಗಳು. ಗುರುವೆಂದರಿಯರು ಲಿಂಗವೆಂದರಿಯರು ಜಂಗಮವೆಂದರಿಯರು. ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ. ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು. ಅರಿದು ಮಾಡಿ ಮರೆದಿರು ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ.