Index   ವಚನ - 671    Search  
 
ಗುರುವನರಿದು ಮರೆದವರೆಂದು ಗುರುಭಕ್ತಿಯ ನಾಶಮಾಡುವರು, ಆಣವ ಮಲಮೋಹಿತರು. ಲಿಂಗವನರಿದು ಮರೆದವರೆಂದು ಲಿಂಗಭಕ್ತಿಯ ನಾಶಮಾಡುವರು, ಮಾಯಾಮಲಮೋಹಿತರು. ಜಂಗಮವನರಿದು ಮರೆದವರೆಂದು ಜಂಗಮಭಕ್ತಿಯ ನಾಶಮಾಡುವರು ಕಾರ್ಮಿಕಮಲಮೋಹಿತರು. ಇವರನೆಂತು ಶರಣರೆನ್ನಬಹುದು? ಮಲತ್ರಯವನಳಿದು ಲಿಂಗತ್ರಯವನರಿದು ಮಾಡುವ ಮಾಟ ಮಹಾಘನದ ಕೂಟ ಗುರುನಿರಂಜನ ಚನ್ನಬಸವಲಿಂಗಾ.