ಸ್ಥೂಲತನುವಿನಲ್ಲಿ ಆಕಾರಸ್ವರೂಪವಾದ
ದೀಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ.
ಸೂಕ್ಷ್ಮ ತನುವಿಲ್ಲಿ ಬಕಾರಸ್ವರೂಪವಾದ
ಶಿಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ.
ಕಾರಣತನುವಿಲ್ಲಿ ಹಂಕಾರಸ್ವರೂಪವಾದ
ಮೋಕ್ಷಗುರುವನರಿದರ್ಚಿಸಬಲ್ಲಾತನೆ ಶಿಷ್ಯ.
ಈ ತ್ರಿವಿಧವನರಿದರ್ಚಿಸಬಲ್ಲಾತಂಗಲ್ಲದೆ
ಶಿಷ್ಯಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sthūlatanuvinalli ākārasvarūpavāda
dīkṣāguruvanaridarcisaballātane śiṣya.
Sūkṣma tanuvilli bakārasvarūpavāda
śikṣāguruvanaridarcisaballātane śiṣya.
Kāraṇatanuvilli haṅkārasvarūpavāda
mōkṣaguruvanaridarcisaballātane śiṣya.
Ī trividhavanaridarcisaballātaṅgallade
śiṣyasthalavilla kāṇā guruniran̄jana cannabasavaliṅgā.