ಗುರುವನರಿದು ಮರೆದವರೆಂದು
ಗುರುಭಕ್ತಿಯ ನಾಶಮಾಡುವರು, ಆಣವ ಮಲಮೋಹಿತರು.
ಲಿಂಗವನರಿದು ಮರೆದವರೆಂದು
ಲಿಂಗಭಕ್ತಿಯ ನಾಶಮಾಡುವರು, ಮಾಯಾಮಲಮೋಹಿತರು.
ಜಂಗಮವನರಿದು ಮರೆದವರೆಂದು
ಜಂಗಮಭಕ್ತಿಯ ನಾಶಮಾಡುವರು ಕಾರ್ಮಿಕಮಲಮೋಹಿತರು.
ಇವರನೆಂತು ಶರಣರೆನ್ನಬಹುದು?
ಮಲತ್ರಯವನಳಿದು ಲಿಂಗತ್ರಯವನರಿದು ಮಾಡುವ ಮಾಟ
ಮಹಾಘನದ ಕೂಟ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Guruvanaridu maredavarendu
gurubhaktiya nāśamāḍuvaru, āṇava malamōhitaru.
Liṅgavanaridu maredavarendu
liṅgabhaktiya nāśamāḍuvaru, māyāmalamōhitaru.
Jaṅgamavanaridu maredavarendu
jaṅgamabhaktiya nāśamāḍuvaru kārmikamalamōhitaru.
Ivaranentu śaraṇarennabahudu?
Malatrayavanaḷidu liṅgatrayavanaridu māḍuva māṭa
mahāghanada kūṭa guruniran̄jana
cannabasavaliṅgā.