Index   ವಚನ - 681    Search  
 
ಮೊದಲೆನ್ನ ಕೈವಶವಾಗಿರ್ದ ಪುರುಷನ ಕಣ್ಣಸನ್ನೆಯಲ್ಲಿರಿಸಿಕೊಂಡಳೆಮ್ಮಕ್ಕ ; ಇದು ನೀತಿಯೇ? ಕಾಮಿಸಿ ಕಲ್ಪಿಸಿ ಒಲಿಸಿಕೊಂಡವಳಕ್ಕ ; ಇದು ನೀತಿಯೇ? ಒಳಗೊಳಗೆ ಮಾತನಾಡಿ ಮೋಹಿಸಿಕೊಂಡವಳಕ್ಕ ; ಇದು ನೀತಿಯೇ? ಇದನರಿದು ಮುನಿಸನುಳಿಸಿ ಹಿರಿಯಕ್ಕನೊಲುಮೆಯೊಳು ಪರಸ್ತ್ರೀಯಾಗಿ ಪರಿಪರಿಯಿಂದೆ ಅವರ ಮೇಲೆ ನೆರೆದರೆ ಮರುಳುಗೊಂಡೆನ್ನೊಳಗಾದರು, ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.