Index   ವಚನ - 680    Search  
 
ಮನಪುರುಷ ಮಹಾಲಿಂಗದೇವಗೆ ಲಲನೆಯರೊಲವಿನಿಂದೆನಗೆ ಘನಸುಖವ ಸಾಧಿಸಿಕೊಂಡೆ ಕೇಳಾ. ಆದಿಯವಿಡಿದು ಮೇದಿನಿಯೊಳೊಬ್ಬಳಗೂಡಿ ಸೇವೆಯುಪಚಾರಂಗಳನಿತ್ತು ಶರಣೆಂದು ಹೆಚ್ಚಿಸಿಕೊಂಡೆ ಕಾಣಾ. ಮತ್ತೊಂದು ದಿನ ಸದ್ಗುಣಿಯೆಂಬವಳ ಕೂಡಿ ಮನವೊಲಿದರ್ಚನೆಯನೆಸಗಿ ಮಾಡಿ ಶರಣೆಂದು ಹೆಚ್ಚಿಸಿಕೊಂಡೆ ಕಾಣಾ. ಮತ್ತೆ ಮೇಲೊಬ್ಬಳು ಕಾಮಿನಿಯ ಕೂಡಿ ಸತ್ಯಸೈದಾನ ಸುಪಾಕವನಿತ್ತುಕೊಂಡು ಶರಣೆಂದು ಹೆಚ್ಚಿಸಿಕೊಂಡೆ ಕಾಣಾ. ಮತ್ತೊಬ್ಬಳು ಭಾಮಿನಿಯ ಕೂಡಿ ಅಂತರಂಗದ ಸುವಾಕ್ಯಂಗಳಿಂದೆ ಶರಣೆಂದು ಅರಿದರಿದು ಹೆಚ್ಚಿಸಿಕೊಂಡೆ ಕಾಣಾ. ಮತ್ತೊಬ್ಬಳು ಚಿತ್ರಾಂಗನೆಯ ಕೂಡಿ ಅತ್ಯಂತ ಮೋಹವೆರೆದಪ್ಪಿ ಅಗಲದೆ ಶರಣೆಂದು ಪರಿಣಾಮಿಸಿಕೊಂಡೆ ಕಾಣಾ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಈ ಐವರ ಸಂಪರ್ಕದಿಂದೆ ಪರಮಸುಖಪರಿಣಾಮಿಯಾಗಿ ಪರವಶದೊಳಗಿರ್ದೆನು ಕಾಣಾ.