Index   ವಚನ - 682    Search  
 
ಆಡಬಂದವಳು ಅಲ್ಲೊಂದರಿಯಳು, ನೋಡಬಂದವಳು ಮೇಲೊಂದರಿಯಳು. ನೀಡಬಂದವಳು ಇಲ್ಲೊಂದರಿಯಳು, ಮಾತನಾಡಬಂದವಳು ಮತ್ತೊಂದರಿಯಳು. ಚಿತ್ತವನೊಲಿಸಿತ್ತು ಒತ್ತೆಗೊಂಬ ವನಿತೆ ತಾನೊಬ್ಬಳೆ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾದವಳು.