ಮೊದಲೆನ್ನ ಕೈವಶವಾಗಿರ್ದ ಪುರುಷನ
ಕಣ್ಣಸನ್ನೆಯಲ್ಲಿರಿಸಿಕೊಂಡಳೆಮ್ಮಕ್ಕ ; ಇದು ನೀತಿಯೇ?
ಕಾಮಿಸಿ ಕಲ್ಪಿಸಿ ಒಲಿಸಿಕೊಂಡವಳಕ್ಕ ; ಇದು ನೀತಿಯೇ?
ಒಳಗೊಳಗೆ ಮಾತನಾಡಿ ಮೋಹಿಸಿಕೊಂಡವಳಕ್ಕ ; ಇದು ನೀತಿಯೇ?
ಇದನರಿದು ಮುನಿಸನುಳಿಸಿ ಹಿರಿಯಕ್ಕನೊಲುಮೆಯೊಳು ಪರಸ್ತ್ರೀಯಾಗಿ
ಪರಿಪರಿಯಿಂದೆ ಅವರ ಮೇಲೆ ನೆರೆದರೆ ಮರುಳುಗೊಂಡೆನ್ನೊಳಗಾದರು,
ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
Art
Manuscript
Music
Courtesy:
Transliteration
Modalenna kaivaśavāgirda puruṣana
kaṇṇasanneyallirisikoṇḍaḷem'makka; idu nītiyē?
Kāmisi kalpisi olisikoṇḍavaḷakka; idu nītiyē?
Oḷagoḷage mātanāḍi mōhisikoṇḍavaḷakka; idu nītiyē?
Idanaridu munisanuḷisi hiriyakkanolumeyoḷu parastrīyāgi
paripariyinde avara mēle neredare maruḷugoṇḍennoḷagādaru,
guruniran̄jana cannabasavaliṅgakke pariṇāmavāyittu.