Index   ವಚನ - 696    Search  
 
ಪೃಥ್ವಿಯ ಗುಣವೈದರ ಕಳೆಯನುರುಹಿ ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ. ಅಪ್ಪುವಿನ ಗುಣವೈದರ ಕಳೆಯನುರುಹಿ ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ. ಅಗ್ನಿಯ ಗುಣವೈದರ ಕಳೆಯನುರುಹಿ ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ. ವಾಯುವಿನ ಗುಣವೈದರ ಕಳೆಯನುರುಹಿ ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ. ಆಕಾಶದ ಗುಣವೈದರ ಕಳೆಯನುರುಹಿ ತನ್ನ ಸುಳುಹನರಿಯದನ್ನಕ್ಕರ ಶರಣನಲ್ಲ. ಇಂತೀ ಪಂಚಭೂತಾಳಿಯ ತಲೆಯಲ್ಲಿ ಹೊತ್ತು ನಲಿನಲಿದು ನಡೆಯುತ್ತ ಶರಣರೆನಿಸಿಕೊಂಬ ಶುನಕಜಾತಿಗಳ ನೀತಿಯ ನೋಡಿ ನಗುತ್ತ ನಡೆವರು ನಿಮ್ಮ ಶರಣರು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮತ್ತ.