Index   ವಚನ - 697    Search  
 
ಕಂಗಳ ಕರುಳನರಿಯದೆ ನೋಡುವೆನಯ್ಯಾ ನಿಮ್ಮ ಚರಣಕಮಲವನು. ಮನದ ಮಸಕನರಿಯದೆ ಮಾಡುವೆನಯ್ಯಾ ನಿಮ್ಮ ಚರಣಕಮಲಕ್ಕೆ. ಭಾವದ ಕಾಳಗತ್ತಲೆಯನರಿಯದೆ ಕೂಡುವೆನಯ್ಯಾ ನಿಮ್ಮ ಚರಣಕಮಲವನು. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರೊಳಗೆ ನಾನೊಂದು ಸ್ಥಲಾಧಿಕಾರಿಯಂಗ ಕಾಣಾ.