Index   ವಚನ - 700    Search  
 
ಮಾನಸ ವಾಚಕ ಕಾಯಕದ ಗತಿಮತಿಗತೀತವಾದ ನಿರಂಜನಲಿಂಗವನು, ಕರ ನಯನ ಮನ ಪ್ರಾಣ ಭಾವ ಜ್ಞಾನದಲ್ಲಿ ಪರಿಪೂರ್ಣವಾಗಿ ತೆರಹಿಲ್ಲದಿರ್ಪ ಶರಣಂಗೆ ಮುಟ್ಟಿ ನೋಡಿ ನೆನೆಯಬೇಕೆಂಬುದಿಲ್ಲ, ಭೇದಿಸಿ ವಿಚಾರಿಸಿ ಕೂಡಬೇಕೆಂಬುದಿಲ್ಲ ನೋಡಾ. ಜ್ಞಾತೃವಿಂಗೆ ಜ್ಞೇಯಸ್ವರೂಪವಾಗಿರ್ದ ಕಾಣಾ. ಸ್ವರೂಪವನರಿಯದೆ ಕರಣತ್ರಯದಾವರಣದಲ್ಲಿ ವರ್ತಿಸಿ ಹಿರಿದಪ್ಪ ಗಮನಾಗಮನವರಿದು ಮರೆದ ಮಹಿಮರೆಂದಡೆ ಜಿಹ್ವೆ ಮನ ಸಂಗದಚ್ಚರಿಯೆನುತ ನಗುತಿರ್ದರು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು.