Index   ವಚನ - 703    Search  
 
ಅಯ್ಯಾ, ನಿನ್ನನು ಕಾಯವಿಡಿದು ಕಂಡು ಕೂಡೇನೆಂದರೆ ಕ್ರಿಯಕ್ಕಗಮ್ಯ ಕಾಣಾ. ಅಯ್ಯಾ, ನಿನ್ನನು ಮನವಿಡಿದು ಕಂಡು ಕೂಡೇನೆಂದರೆ ಜ್ಞಾನಗಮ್ಯ ಕಾಣಾ. ಅಯ್ಯಾ, ನಿನ್ನನು ಭಾವವಿಡಿದು ಕಂಡು ಕೂಡೇನೆಂದರೆ ಭಾವಕಗಮ್ಯ ಕಾಣಾ. ಇವು ಯಾತಕ್ಕೂ ಸಿಕ್ಕಬಾರದಿರುವ ಶ್ರುತಿಗುರುಸ್ವಾನುಭಾವದಿಂದರಿದು ಕಾಯ ಮನ ಭಾವವನರಿಯದೆ ಕಂಡು ಕೂಡಿ ಅಗಲಿಕೆಯನರಿಯದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಸುಖಿಯಾಗಿರ್ದೆನು.