Index   ವಚನ - 716    Search  
 
ಮೂರು ಹೊಳಲ ಕುಳವ ನೋಡಾ! ವಶಗತವಮಾಡಿ ಆರು ಪುರದ ಕುಳವನರಿದು ಮರೆದಲ್ಲಿ ಕೋಪದ ವರ್ಣವೇನಯ್ಯಾ? ತಾಪದಿಂದ ತೋರುವ ವರ್ಣವೇನಯ್ಯಾ? ಮೋಹದಿಂದ ಮೂಡುವ ವರ್ಣವೇನಯ್ಯಾ? ಬೆಳಗ ಮರೆದು ಕತ್ತಲೆಯಲ್ಲುಂಬ ಮಿಥ್ಯವೆಂತಯ್ಯಾ? ಸತ್ಯವರ್ಣ ನಿತ್ಯವಾದಲ್ಲಿ ಮತ್ತೆ ಉಂಟೆ ಗುರುನಿರಂಜನ ಚನ್ನಬಸವಲಿಂಗಾ?