ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ,
ಗುರುಮುಟ್ಟಿ ಗುರುವಾದೆವೆಂದು ಬಿಟ್ಟು ಹಿಡಿದು ಹಿಡಿದು ಬಿಟ್ಟು
ಹೊಟ್ಟೆಯ ಹೊರೆಯಲೋಸುಗ ನಂಟುಬಿಚ್ಚಿ ಗಂಟಿಕ್ಕುವ
ತುಂಟು ಹೊಯ್ಮಾಲಿಗಳನೆಂತು ಶರಣರೆನ್ನಬಹುದು?
ಕಾಸಿನಾಸೆಗೆ ದೇಶವ ತಿರುಗಿ,
ಬೇಸರಿಲ್ಲದೆ ಬೇಡಿ ಬೇಡಿ ಘಾಸಿಯಾಗಿ,
ಮುಂದಣ ಹೇಸಿಕೆ ಕಂಡು ಕಂಡು ಬೀಳುವ
ಖೂಳ ಕುಟಿಲ ಕಾಳಮಾನವರನೆಂತು ಶರಣರೆನ್ನಬಹುದು?
ಬಾಳಿ ಬದುಕಲರಿಯದೆ ಕೇಳಿ ಮೇಳವ ಮಾಡಿ
ಹಾಳುಗೋಷ್ಠಿಯಕಲಿತು, ಕಲಿಯುಪಾಧಿಯೊಳು ನಿಂದು
ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವನರಿಯದೆ ಹಿರಿಯರೆನಿಸಿಕೊಂಡು,
ಹೋಗಿ ಬಂದುಂಬ ಕುರಿಗಳನೆಂತು ಶರಣರೆನ್ನಬಹುದು?
ನಮ್ಮ ಗುರುನಿರಂಜನ ಚನ್ನಬಸವಲಿಂಗದಂಗವೆಂಬ ಘನಪ್ರಸಾದವ
ಹಿಂಗದಿರ್ದ ತ್ರಿವಿಧಶೂನ್ಯಶರಣರಂತಲ್ಲದ
ಮರುಳುಗಳನೆಂತು ಶರಣರೆನ್ನಬಹುದು?
Art
Manuscript
Music
Courtesy:
Transliteration
Liṅganiṣpattigaḷācaraṇeya kaṇḍu, saṅgahēya māḍade,
gurumuṭṭi guruvādevendu biṭṭu hiḍidu hiḍidu biṭṭu
hoṭṭeya horeyalōsuga naṇṭubicci gaṇṭikkuva
tuṇṭu hoymāligaḷanentu śaraṇarennabahudu?
Kāsināsege dēśava tirugi,
bēsarillade bēḍi bēḍi ghāsiyāgi,
mundaṇa hēsike kaṇḍu kaṇḍu bīḷuva
khūḷa kuṭila kāḷamānavaranentu śaraṇarennabahudu?
Bāḷi badukalariyade kēḷi mēḷava māḍi
hāḷugōṣṭhiyakalitu, kaliyupādhiyoḷu nindu
nijabhakti sujñāna paramavairāgyavanariyade hiriyarenisikoṇḍu,
hōgi bandumba kurigaḷanentu śaraṇarennabahudu?
Nam'ma guruniran̄jana cannabasavaliṅgadaṅgavemba ghanaprasādava
hiṅgadirda trividhaśūn'yaśaraṇarantallada
maruḷugaḷanentu śaraṇarennabahudu?