ಅಂಗ ಮನ ಪ್ರಾಣವನರಿಯದೆ ತನ್ನನಿತ್ತ
ಸತ್ಯಶರಣರ ಕಳವಳಿಕೆಗೆ ಸಮವೆಂದು ಬೀರಿಕೊಳ್ಳುವ
ಕಕ್ಕುಲಾತಿ ಡಂಭಕವೇಷಧಾರಿಗಳು ತಮ್ಮನರಿಯದೆ
ತಾವು ಗುರುಲಿಂಗಜಂಗಮಕೊಕ್ಕುಮಿಕ್ಕಿ
ಯೋಗ್ಯವೆಂಬ ಅಯೋಗ್ಯ ನುಡಿಗಳನೇನೆಂಬೆನಯ್ಯಾ?
ಆ ಗುರುಲಿಂಗಜಂಗಮವು ಬಂದಲ್ಲಿ
ಅರ್ಥ ಪ್ರಾಣ ಅಭಿಮಾನವಿಡಿದು ವಂಚನೆಯೊಳು ನಿಂದು
ಮಾಡಿ ನೀಡಿ ಕಳುಹುವ ತ್ರಿವಿಧಗುರುದ್ರೋಹಿಗಳಿಗೆ
ಸತ್ಕ್ರಿಯಾಚಾರವೆಲ್ಲಿಹದೊ!
ಸತ್ಕ್ರಿಯಾಚಾರವಿಲ್ಲದ ತ್ರಿವಿಧಲಿಂಗದ್ರೋಹಿಗಳಿಗೆ
ಸುಜ್ಞಾನ ಆಚಾರವೆಲ್ಲಿಹದೊ!
ಸುಜ್ಞಾನ ಆಚಾರವಿಲ್ಲದ ತ್ರಿವಿಧಜಂಗಮದ್ರೋಹಿಗಳಿಗೆ
ಸಮರಸಭಾವಾಚಾರವೆಲ್ಲಿಹದೊ!
ಸಮರಸಭಾವಾಚಾರವಿಲ್ಲದ ತ್ರಿವಿಧಪ್ರಸಾದದ್ರೋಹಿಗಳಿಗೆ
ಗುರುನಿರಂಜನ ಚನ್ನಬಸವಲಿಂಗವಾದ
ನಿಜಪದವೆಲ್ಲಿಹದೊ!
Art
Manuscript
Music
Courtesy:
Transliteration
Aṅga mana prāṇavanariyade tannanitta
satyaśaraṇara kaḷavaḷikege samavendu bīrikoḷḷuva
kakkulāti ḍambhakavēṣadhārigaḷu tam'manariyade
tāvu guruliṅgajaṅgamakokkumikki
yōgyavemba ayōgya nuḍigaḷanēnembenayyā?
Ā guruliṅgajaṅgamavu bandalli
artha prāṇa abhimānaviḍidu van̄caneyoḷu nindu
māḍi nīḍi kaḷuhuva trividhagurudrōhigaḷige
Satkriyācāravellihado!
Satkriyācāravillada trividhaliṅgadrōhigaḷige
sujñāna ācāravellihado!
Sujñāna ācāravillada trividhajaṅgamadrōhigaḷige
samarasabhāvācāravellihado!
Samarasabhāvācāravillada trividhaprasādadrōhigaḷige
guruniran̄jana cannabasavaliṅgavāda
nijapadavellihado!