ಚಿದ್ಘನಪ್ರಸಾದಕ್ಕಂಗವಾದ ಚಿನ್ಮಯ ಶರಣರ ಘನವನರಿಯದೆ,
ನಾವು ಫಲಪದಕ್ಕೆಳಸದ ಸದಮಲ ದಾಸೋಹಿಗಳೆಂದು,
ಮದನಾರಿಯ ವೇಷವ ಧರಿಸಿ,
ಇತರ ಇಂಗಿತವನರಿಯದೆ ಹದುರ ಚೆದುರಿನಿಂದೆ ಮದಮಾನವರ
ಹೃದಯಕರಗಿಸಿ,
ಸಹಜ ನಿರೂಪಾಧಿಗಳುಳಿದು ದುರ್ವುಪಾಧಿಯೊಳು ನಿಂದು
ಭಕ್ತ ಮಹೇಶ್ವರರುಗಳಿಗೆ ಮಾಡುವೆನೆಂದು ಭೂತಜನಕಿಕ್ಕಿ
ಲೆಕ್ಕವ ಹೇಳಿ ಅಕ್ಕರೆಯಿಂದೆ ಮುಕ್ಕಣ್ಣನ ಪದವೆಮಗೆಂದು ಹೆಚ್ಚುಗೆವಡೆದು
ಒಕ್ಕಲು ಸಹಿತ ಉದರ ಹೊರೆವ
ಮುಕ್ಕ ಭಂಗಿತರಿಗಿಕ್ಕಿದ ಭಾವತೊಡರು ಸಹಜವೆಂದು
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಶರಣರು ಗಹಗಹಿಸಿ ಮಿಕ್ಕಿ ನಿಂದರು.
Art
Manuscript
Music
Courtesy:
Transliteration
Cidghanaprasādakkaṅgavāda cinmaya śaraṇara ghanavanariyade,
nāvu phalapadakkeḷasada sadamala dāsōhigaḷendu,
madanāriya vēṣava dharisi,
itara iṅgitavanariyade hadura cedurininde madamānavara
hr̥dayakaragisi,
sahaja nirūpādhigaḷuḷidu durvupādhiyoḷu nindu
bhakta mahēśvararugaḷige māḍuvenendu bhūtajanakikki
lekkava hēḷi akkareyinde mukkaṇṇana padavemagendu heccugevaḍedu
okkalu sahita udara horeva
mukka bhaṅgitarigikkida bhāvatoḍaru sahajavendu
guruniran̄jana cannabasavaliṅgā
nim'ma śaraṇaru gahagahisi mikki nindaru.