Index   ವಚನ - 738    Search  
 
ಅವ್ವಾ, ಬನ್ನಿರೆ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಮಕ್ಕಳೆಲ್ಲ ನಮ್ಮಕ್ಕನ ಮನೆಯಲೊಕ್ಕುದನುಂಬುವ. ಬನ್ನಿರೆ ಎಮ್ಮ ಸುಚಿತ್ತ ಕೈಯ ಪಿಡಿದು ನಿಂದ ನಲ್ಲನ ಸುಗಂಧಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಬುದ್ಧಿಯ ಕೈಯ ಪಿಡಿದು ಬಂದ ನಲ್ಲನ ಸುರಸಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ನಿರಹಂಕಾರ ಕೈಯ ಪಿಡಿದು ಬಂದ ನಲ್ಲನ ಸುರೂಪಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಮನ ಕೈಯ ಪಿಡಿದು ಬಂದ ನಲ್ಲನ ಸುಸ್ಪರ್ಶನಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಜ್ಞಾನ ಕೈಯ ಪಿಡಿದು ಬಂದ ನಲ್ಲನ ಸುಶಬ್ದಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸದ್ಭಾವ ಕೈಯ ಪಿಡಿದು ಬಂದ ನಲ್ಲನ ಸುತೃಪ್ತಿಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಕೈಗಳಿಂದೆ ಗುರುನಿರಂಜನ ಚನ್ನಬಸವಲಿಂಗವ ಬಿಡದೆ ಕೂಡಿ ಉಂಬುವ ಸುಖವ ಹೇಳುವರೆ ತೆರಹಿಲ್ಲ ಕಾಣಿರಮ್ಮಾ