ಅಯ್ಯಾ, ಎನ್ನ ಕಾಯದಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಕ್ರಿಯಕ್ಕಗಮ್ಯ ಕಾಣಾ.
ಅಯ್ಯಾ, ಎನ್ನ ಮನದ ಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಜ್ಞಾನಕ್ಕಗಮ್ಯ ಕಾಣಾ.
ಅಯ್ಯಾ, ಎನ್ನ ಭಾವದ ಗತಿಯಿಂದೆ
ನಿನ್ನ ಬೆಳಗನರಿದು ಕೂಡೇನೆಂದರೆ ಭಾವಕ್ಕಗಮ್ಯ ಕಾಣಾ.
ಮತ್ತೆಂತೆಂದೊಡೆ, ಪ್ರಾಣವ ಕರಗಿ ಭಕ್ತಿರಸವೆರೆದು
ಸ್ವಯವ ಮರೆದು ಪಟವ ಹರಿದು ನೆರೆದಲ್ಲಿ ನಿರುತವಾಗಿರ್ದ ನೀನೇ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ayyā, enna kāyadagatiyinde
ninna beḷaganaridu kūḍēnendare kriyakkagamya kāṇā.
Ayyā, enna manada gatiyinde
ninna beḷaganaridu kūḍēnendare jñānakkagamya kāṇā.
Ayyā, enna bhāvada gatiyinde
ninna beḷaganaridu kūḍēnendare bhāvakkagamya kāṇā.
Mattentendoḍe, prāṇava karagi bhaktirasaveredu
svayava maredu paṭava haridu neredalli nirutavāgirda nīnē
guruniran̄jana cannabasavaliṅgā.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ