Index   ವಚನ - 748    Search  
 
ಕಾಲಿಲ್ಲದ ಕಾಲಲ್ಲಿ ನಡೆವ ಉನ್ನತಿಯೊಳು ಕಾಂಬುವರು. ಕೈಯಿಲ್ಲದ ಕೈಯಲ್ಲಿ ಹಿಡಿವ ಉನ್ನತಿಯೊಳು ಕಾಂಬುವರು. ಕಣ್ಣಿಲ್ಲದ ಕಣ್ಣಿನಲ್ಲಿ ನೋಡುವ ಉನ್ನತಿಯೊಳು ಕಾಂಬುವರು. ಕೂಟಿಲ್ಲದ ಕೂಟದಲ್ಲಿ ಉನ್ನತಿಯೊಳು ಕಾಂಬುವರು ಶರಣರು ಗುರುನಿರಂಜನ ಚನ್ನಬಸವಲಿಂಗ ತಾನೆಯೆಂದು.