Index   ವಚನ - 753    Search  
 
ನಾಗರಪಂಚಮಿ ನಾರಿಯರು ನಾಗತಿಯ ಕೂಡಿ ಹಾಲ ಹೊಯ್ಯಬಂದ ಪರಿಯ ನೋಡಾ! ಹಾಲ ಕುಡಿದ ನಾಗರ ಹಾರುವನ ಹಿಡಿದು ಮೂರುಲೋಕದೊಳಗೆ ಗರಳಗೊಂಡು ತಿರುಗಿಸಿತ್ತು ನೋಡಾ. ಹಾರುವನ ಹೊಕ್ಕಳದಲ್ಲಿ ನಕ್ಷತ್ರಮೂಡಿ ಚಂದ್ರನಕೂಡಿ ಆಕಾಶಮಂಡಲದಲ್ಲಿರಲು ಚಂದ್ರನ ಬೆಳಗ ಕಂಡ ಜಲನಿಧಿ ಮೇರೆದಪ್ಪಿ ಹರಿಯಲು ಮೂರುಲೋಕ ಮುಳುಗಿ, ನಾಗತಿ ಸತ್ತು ಪಂಚಮಿನಾರಿಯರು ನಾಗರನೆತ್ತಿ ಬಿಳಿಹಾಲ ಹೊಯ್ಯುತ್ತ ಹಾರುವನಕೊಂದು ತಳಿಗೆಯೊಳಿಟ್ಟು ಆರತಿಯ ಬೆಳಗಿದರು ಜಯಜಯವೆಂದು ಗುರುನಿರಂಜನ ಚನ್ನಬಸವಲಿಂಗದಂಗದ ಬೆಳಗಿನೊಳುಬೆರೆದು.