Index   ವಚನ - 760    Search  
 
ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು ಬೆರೆಸಿ ಹೇಳುವರು ಹಾದಿ ಹತ್ತಿಕೆಯ ನುಡಿಗಳ. ಅದು ಎನಗೆಂದೂ ಸೊಗಸದು ಕಾಣಾ. ಎನ್ನ ನಿಜರತ್ನಪ್ರಕಾಶ ನಿಮ್ಮ ಶರಣರ ವಚನ. ಇವಕ್ಕೆ ಸಾಕ್ಷಿ ತಂದು ಹೇಳುವ ಭಾವವ ದಹಿಸಿ ಭಸ್ಮವ ಮಾಡಿ ಧರಿಸಿರ್ದೆನಾಗಿ ಕಾಣಿಸದು. ಶರಧಿಗೆ ತೊರೆಗಾವಲಿ, ಮೇರುವಿಗೆ ಮೊರಡಿ, ಗಗನಕ್ಕೆ ಕೊಪ್ಪರಿಗೆ ತೋರಿದರೆ ಸರಿಯಪ್ಪುದೆ? ಆ ಕುರಿಗಳ ನುಡಿ ಅತ್ತಿರಲಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರ ನುಡಿಬೆಳಗನಗಲದಿರ್ದೆನು ನಿಮ್ಮೊಳಗೆ.