Index   ವಚನ - 759    Search  
 
ವೇದಾಗಮ ಸಾಕ್ಷಿಯ ಘನವೆಂದು ನುಡಿವರು, ನುಡಿದ ನುಡಿಯೇನೆಂದರಿಯರು. ಇದು ಏನು ಹೇಳಾ ಪಶುಭಾವ? ಐವತ್ತೆರಡಕ್ಷರವನುದಯಿಸುವುದೇ ವೇದ? ನುಡಿಯುವುದೇ ಆಗಮ? ಬೇರರಸಲೇನು ಕಸಮನುಜರಿರಾ, ನಿಮ್ಮ ಕುರುಹು ಕುರುಹನರಿಯದೆ ಕುರಿಗಳಾದವು. ಕಳೆದುಳಿದು ಬನ್ನಿರಿ, ಗುರುನಿರಂಜನ ಚನ್ನಬಸವಲಿಂಗವಾಗಬೇಕಾದಡೆ ಕಳೆ ನಾದ ಬಿಂದುವನರಿಯಿರಿ.