Index   ವಚನ - 761    Search  
 
ಅಯ್ಯಾ, ನಿಮ್ಮ ಬಸವಣ್ಣನನುಭಾವದ ಬೆಳಗೆನ್ನ ಇಷ್ಟಲಿಂಗ ಕಾಣಾ. ಅಯ್ಯಾ, ನಿಮ್ಮ ಚನ್ನಬಸವಣ್ಣನನುಭಾವದ ಬೆಳಗೆನ್ನ ಪ್ರಾಣಲಿಂಗ ಕಾಣಾ. ಅಯ್ಯಾ, ನಿಮ್ಮ ಪ್ರಭುದೇವರನುಭಾವದ ಬೆಳಗೆನ್ನ ಭಾವಲಿಂಗ ಕಾಣಾ. ಅಯ್ಯಾ, ನಿಮ್ಮ ಸಕಲ ಪುರಾತನರನುಭಾವದ ಬೆಳಗೆನ್ನ ಸರ್ವಾಂಗದಲ್ಲಿ. ಗುರುನಿರಂಜನ ಚನ್ನಬಸವಲಿಂಗಾ, ನೀನೇ ಕಾಣಾ ಮತ್ತೊಂದ ಕರಣತ್ರಯದಲ್ಲಿ ಕಂಡೆನಾದಡೆ ನಿಮಗೆ ನಾನಂದೆ ದೂರ.