Index   ವಚನ - 769    Search  
 
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು. ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು. ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು. ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು. ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು. ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು. ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ? ಗುರುನಿರಂಜನ ಚನ್ನಬಸವಲಿಂಗಾ