Index   ವಚನ - 771    Search  
 
ಕರ ಮನ ಭಾವದಲ್ಲೆಸೆವ ಪರಶಿವಲಿಂಗಕ್ಕೆ ಸ್ವಯಂ ರತಿತ್ರಯವಿತ್ತು ಮರೆದಿರಲಾರದೆ, ಪರಿಪರಿಯ ಕುಶಲಗತಿಮತಿಗಳೊಡವೆರೆದ ದುಸ್ಸಾರಕ್ಕವೇ ರತಿಯನಿತ್ತು ಮರೆದಿರುವ ಮರುಳಮಾನವರಿಗಿನ್ನೆತ್ತಣ ಶರಣೈಕ್ಯಸ್ಥಲ ಹೇಳಾ ಗುರುನಿರಂಜನ ಚನ್ನಬಸವಲಿಂಗಾ!