ಲಿಂಗದೊಳಗಾರಿಂದ್ರಿಯ ಸಾರಾಯವನರಿದು
ಮರೆದಾನಂದತ್ವವ ಕಾಣಲರಿಯದೆ,
ಈಷಣತ್ರಯದೊಳಗೆ ಆರಿಂದ್ರಿಯ ಸಾರಾಯವನರಿದು
ಮರೆದು ಆನಂದತ್ವವ ಕಂಡು ಹೋಗಿ
ಮುಳುಗುವ ಶವಮಾನವಕುಳವನೆಂತು ಶರಣರೆನ್ನಬಹುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ!
Art
Manuscript
Music
Courtesy:
Transliteration
Liṅgadoḷagārindriya sārāyavanaridu
maredānandatvava kāṇalariyade,
īṣaṇatrayadoḷage ārindriya sārāyavanaridu
maredu ānandatvava kaṇḍu hōgi
muḷuguva śavamānavakuḷavanentu śaraṇarennabahudu hēḷā
guruniran̄jana cannabasavaliṅgā!