Index   ವಚನ - 772    Search  
 
ಲಿಂಗದೊಳಗಾರಿಂದ್ರಿಯ ಸಾರಾಯವನರಿದು ಮರೆದಾನಂದತ್ವವ ಕಾಣಲರಿಯದೆ, ಈಷಣತ್ರಯದೊಳಗೆ ಆರಿಂದ್ರಿಯ ಸಾರಾಯವನರಿದು ಮರೆದು ಆನಂದತ್ವವ ಕಂಡು ಹೋಗಿ ಮುಳುಗುವ ಶವಮಾನವಕುಳವನೆಂತು ಶರಣರೆನ್ನಬಹುದು ಹೇಳಾ ಗುರುನಿರಂಜನ ಚನ್ನಬಸವಲಿಂಗಾ!