Index   ವಚನ - 773    Search  
 
ಸುಜ್ಞಾನದಲ್ಲಿ ಮುಳುಗಿ ನಡೆದ ಶರಣ ಕಾಮದಲ್ಲಿ ಮುಳುಗುವನಲ್ಲ, ಕ್ರೋಧದಲ್ಲಿ ಮುಳುಗುವನಲ್ಲ, ಲೋಭದಲ್ಲಿ ಮುಳುಗುವನಲ್ಲ, ಮೋಹದಲ್ಲಿ ಮುಳುಗುವನಲ್ಲ, ಮದದಲ್ಲಿ ಮುಳುಗುವನಲ್ಲ, ಮತ್ಸರದಲ್ಲಿ ಮುಳುಗುವನಲ್ಲ. ಮತ್ತೆಂತೆಂದೊಡೆ, ಕಾಮವ ಶಿವಾನುಭಾವಿಗಳಲ್ಲಿಟ್ಟು, ಕ್ರೋಧವ ತನುಪ್ರಕೃತಿಯ ಮೇಲಿಟ್ಟು, ಲೋಭವ ಪಾದೋದಕ ಪ್ರಸಾದದಲ್ಲಿಟ್ಟು, ಮೋಹವನು ಗುರುಲಿಂಗಜಂಗಮದಲ್ಲಿಟ್ಟು, ಮದವನು ಮಾಯಾಪ್ರಕೃತಿಯ ಮೇಲಿಟ್ಟು, ಮತ್ಸರವನು ಮಲತ್ರಯದ ಮೇಲಿಟ್ಟು, ಗುರುನಿರಂಜನ ಚನ್ನಬಸವಲಿಂಗದಂಗದಲ್ಲಿ ಮುಳುಗಿರ್ದನು.