Index   ವಚನ - 779    Search  
 
ತನುಶೂನ್ಯಶರಣಂಗೆ ಕುಲವೆಂಬುದೇನು ಹೇಳಾ. ಮನಶೂನ್ಯಶರಣಂಗೆ ಛಲವೆಂಬುದೇನು ಹೇಳಾ. ಪ್ರಾಣಶೂನ್ಯಶರಣಂಗೆ ಧನವೆಂಬುದೇನು ಹೇಳಾ. ಭಾವಶೂನ್ಯಶರಣಂಗೆ ತಪವೆಂಬುದೇನು ಹೇಳಾ. ತ್ರಿಪುಟಿಶೂನ್ಯಶರಣಂಗೆ ಭಿನ್ನವೆಂಬುದೇನು ಹೇಳಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನು ಸರ್ವಶೂನ್ಯ ಲಿಂಗೈಕ್ಯ ಕಾಣಾ.