Index   ವಚನ - 790    Search  
 
ಆದಿಯ ಆಧಾರವಿಡಿದವರಿಗಸಾಧ್ಯವ ಸಾಧಿಸಿ ಕಂಡ ಶರಣ ತನುವುಳ್ಳನ್ನಕ್ಕರ ಭಕ್ತಿಯಮಾಡಿ, ಮನವುಳ್ಳನ್ನಕ್ಕರ ಅರ್ಚನೆಯಮಾಡಿ, ಪ್ರಾಣವುಳ್ಳನ್ನಕ್ಕರ ದಾಸೋಹವಮಾಡಿ, ಭಾವವುಳ್ಳನ್ನಕ್ಕರ ಸಮರಸಕ್ಕೆಯ್ದಬೇಕು. ತನ್ನ ವಿನೋದ ಸೂಸಿಕೊಂಡಲ್ಲಿ ತನು ಇಷ್ಟಲಿಂಗೈಕ್ಯವು, ಮನ ಪ್ರಾಣಲಿಂಗೈಕ್ಯವು, ಪ್ರಾಣವು ಭಾವಲಿಂಗೈಕ್ಯವು, ಭಾವವು ಗುರುನಿರಂಜನ ಚನ್ನಬಸವಲಿಂಗೈಕ್ಯವಾದುದೇ ಶರಣಂಗೆ ನಿಜೈಕ್ಯವು.