Index   ವಚನ - 792    Search  
 
ಕಾಯವ ಕರ್ಮದಲ್ಲಿ ಮುಳುಗಿಸಿ, ಮನವನು ಮಾಯಾವಿಷಯದಲ್ಲಿ ಮುಳುಗಿಸಿ, ಪ್ರಾಣವನು ಹೇಮದ ಆಮಿಷದಲ್ಲಿ ಮುಳುಗಿಸಿ, ಭಾವವನು ಸಕಲಭ್ರಮೆಯಲ್ಲಿ ಮುಳುಗಿಸುವ ಅವಿಚಾರಿಗೆ ಅಪ್ರತಿಮಕ್ರಿಯೆಯಲ್ಲಡಗಿ, ಅನುಪಮಜ್ಞಾನದಲ್ಲಿ ಉಡುಗಿ, ಪರಮಜ್ಞಾನದಲ್ಲಿ ಹೊಕ್ಕು, ಮಹಾಜ್ಞಾನದಲ್ಲಿ ಮಗ್ನತೆಯನೈದುವ ನಿಜಪದವೆಂತು ಸಾಧ್ಯವಪ್ಪುದು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.