Index   ವಚನ - 807    Search  
 
ಆರೈಕ್ಯವನರಿದುಬಂದರೆ ಭಕ್ತಲಿಂಗೈಕ್ಯವೆಂಬೆ. ಆರೈಕ್ಯವನರಿದುಬಂದರೆ ಮಹೇಶ್ವರಲಿಂಗೈಕ್ಯವೆಂಬೆ. ಆರೈಕ್ಯವನರಿದುಬಂದರೆ ಪ್ರಸಾದಿಲಿಂಗೈಕ್ಯವೆಂಬೆ. ಆರೈಕ್ಯವನರಿದುಬಂದರೆ ಪ್ರಾಣಲಿಂಗಿಲಿಂಗೈಕ್ಯವೆಂಬೆ. ಆರೈಕ್ಯವನರಿದುಬಂದರೆ ಶರಣಲಿಂಗೈಕ್ಯವೆಂಬೆ. ಆರೈಕ್ಯವನರಿದುಬಂದರೆ ನಿಜೈಕ್ಯವೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.