Index   ವಚನ - 816    Search  
 
ಮಣ್ಣ ಹಿಡಿದು ಸಂಸಾರಿಯಲ್ಲ, ಮಣ್ಣ ಬಿಟ್ಟು ವೈರಾಗ್ಯನಲ್ಲ. ಹೆಣ್ಣ ಹಿಡಿದು ವಿಕಾರಿಯಲ್ಲ, ಹೆಣ್ಣ ಬಿಟ್ಟು ನಿಷ್ಕಾಮಿಯಲ್ಲ. ಹೊನ್ನ ಹಿಡಿದು ಲೋಭಿಯಲ್ಲ, ಹೊನ್ನ ಬಿಟ್ಟು ನಿರ್ಲೋಭಿಯಲ್ಲ. ಹೇಗೆ ಇರ್ದಂತೆ ಗುರುನಿರಂಜನ ಚನ್ನಬಸವಲಿಂಗದೊಳಗೆ ಐಕ್ಯ ಕಾಣಾ.