Index   ವಚನ - 838    Search  
 
ತಂದೆ ತಾಯಿಯ ಮಾತ ನೋಡಿಕೊಂಡು ಬಂದೆ ನೋಡಯ್ಯಾ. ಮಾತಿನ ಮರುಳರ ಕೂಡಿನಿಂದೆ ನೋಡಯ್ಯಾ. ನೋಡಿನಿಂದಲ್ಲಿ ಮರುಳಗಳಲ್ಲಿಟ್ಟು ಹೋದರು ನೋಡಯ್ಯಾ. ಸಂಗದಿಂದೆ ಸಂಗವನಳಿದು ನಿಸ್ಸಂಗಿಯಾದೆ ನೋಡಯ್ಯಾ. ಗುರುನಿರಂಜನ ಚನ್ನಬಸವಲಿಂಗದ ಗರ್ಭದೊಳಡಗಿದೆ ನೋಡಯ್ಯಾ.