Index   ವಚನ - 840    Search  
 
ಗುರುಪಾದೋದಕದೊಳಗಿರ್ದೆವೆಂಬರು ; ಗುರುಪಾದೋದಕದ ನೆಲೆಯನರಿಯದ ಸಂಚಿತದೊಳಗಿಪ್ಪ ವಂಚಕರು. ಲಿಂಗಪಾದೊದಕದೊಳಗಿರ್ದೆವೆಂಬರು ; ಲಿಂಗಪಾದೋದಕದ ನೆಲೆಯನರಿಯದ ಪ್ರಾರಬ್ಧದೊಳಗಿಪ್ಪ ಮಂದಾತ್ಮರು. ಜಂಗಮಪಾದೋದಕದೊಳಗಿರ್ದೆವೆಂಬರು ; ಜಂಗಮಪಾದೋದಕದ ನೆಲೆಯನರಿಯದ ಆಗಾಮಿಯೊಳಗಿಪ್ಪ ಅನಿಷ್ಟರು. ತ್ರಿವಿಧೋದಕವನರಿಯದೆ ತ್ರಿವಿಧಕರ್ಮದೊಳು ಮುಳುಗಿರ್ದ ನವಖಂಡ ಪಾದೋದಕೈಕ್ಯರೆಂಬ ಸುಲಭನುಡಿಗೆ ಮೆಚ್ಚರಯ್ಯಾ ನಿಮ್ಮ ಶರಣರು ಗುರುನಿರಂಜನ ಚನ್ನಬಸವಲಿಂಗಾ.