Index   ವಚನ - 842    Search  
 
ಮನವ ಮುಳುಗಿಸಿದ ಮಹಾಂತ ಶರಣ ತಾನೆತ್ತೆತ್ತನೋಡಿದರತ್ತತ್ತ ತಾನೇ ನೋಡಾ. ಭಿನ್ನಮಾಟ ಜಾಗ್ರಾವಸ್ಥೆಯೊಳು ಅಣುಮಾತ್ರವರಿಯಬಾರದು ಕಾಣಾ. ಭಿನ್ನನೋಟ ಸ್ವಪ್ನಾವಸ್ಥೆಯೊಳಣುಮಾತ್ರವರಿಯಬಾರದು ನೋಡಾ. ಭಿನ್ನಕೂಟ ಸುಷುಪ್ತಾವಸ್ಥೆಯೊಳಣುಮಾತ್ರವರಿಯಬಾರದು ಕೇಳಾ ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲ ಕಾಣಾ.