ನಿಮಿಷವಳಿದು ಅನಿಮಿಷನಾಗಿ ಅರಿದು
ಮರೆದ ಅಪ್ರತಿಮ ಶರಣ ತಾನೆಂದು
ಕಾರ್ಯ ಕಾರಣಕ್ಕನುಕೂಲಿಯಾದಡು
ತಾ ಮಾಡಿದಡು, ತಾ ಸುಖಿಸಿದಡು,
ತನ್ನ ವಿನೋದದಾನಂದದೊಳಗೆಯಲ್ಲದೆ ಅಣುಮಾತ್ರವಿಲ್ಲ ಕಾಣಾ,
ತಾನೆಂತಿರ್ದಂತೆ ಗುರುನಿರಂಜನ
ಚನ್ನಬಸವಲಿಂಗ ಕಾಣಾ.
Art
Manuscript
Music
Courtesy:
Transliteration
Nimiṣavaḷidu animiṣanāgi aridu
mareda apratima śaraṇa tānendu
kārya kāraṇakkanukūliyādaḍu
tā māḍidaḍu, tā sukhisidaḍu,
tanna vinōdadānandadoḷageyallade aṇumātravilla kāṇā,
tānentirdante guruniran̄jana
cannabasavaliṅga kāṇā.